Monday, May 21, 2007

ಮನಸಿನ ಮೊದಲ ಮಾತು, ತೊದಲ ಮಾತು

"ಮನಸು ಮಹಾ ಮರ್ಕಟ" ಹಂಸಲೇಖ ಅವರ ಈ ಸಾಲು ಎಷ್ಟು ಸತ್ಯ ಅಂಥ ವಿವರಿಸಿ ಹೇಳೋ ಅವಶ್ಯಕತೆ ಇಲ್ಲ.

ಈ ಹುಚ್ಚು ಹಲ್ಕ ಮನಸ್ಸಿಗೆ ಬಂದ ಹಲಾವಾರು ವಿಚಾರಗಳನ್ನು ಹೀಗೆ ಎಲ್ಲೋ ಗೀಚಿ ಬಿಸಾಡಿದ್ದುಂಟು... ಯಾರಿಗೋ ಇ-ಮೈಲ್ ಮಾಡಿ ಮರೆತಿದ್ದುಂಟು... ಇನ್ನು ಕೆಲವು ಅದೃಷ್ಟವಂತ ವಿಚಾರಗಳು "ಡೈರಿ" ಎಂಬ ಪುಸ್ತಕ ಸೇರಿದ್ದೂ ಉಂಟು.... ಮರು ಕ್ಷಣವೇ ಮರೆತಿದ್ದೂ ಉಂಟು.. ಪದೇ ಪದೇ ಮಧುರ ನೆನಪಾಗಿ ಕಾಡಿದ್ದೂ ಉಂಟು... ಕೆಲಒಮ್ಮೆ ಈ ವಿಚಾರಗಳ ಉಗಮದ ಬಗ್ಗೆ, ಇನ್ಯಾರಿಗಾದರೂ ಇದೇ ರೀತಿ ಅನ್ನಿಸಿರಬಹುದಾ? ಅಥವಾ ಇದಕ್ಕೆಲ್ಲಾ ಕಾರಣವಾಗಬಹುದಂಥಾ ಹುಚ್ಚು "HARMONE" ಗಳೇನಾದರೂ ನನ್ನಲ್ಲಿದೆಯೋ ಎಂದೂ ಯೋಚಿಸಿದ್ದುಂಟು...

ಈ ಎಲ್ಲಾ "USELESS" ವಿಚಾರಗಳ ನಡುವೆ ಆಗಾಗ ಇವುಗಳನ್ನು ಎಲ್ಲಾದರೂ ಬರೆದಿಡುವ, ನೆನಪಾದಾಗ ಮತ್ತೆ ಮತ್ತೆ ಓದುವ ಹಂಬಲ ಕಾಡುತ್ತಿತ್ತು. ಎಲ್ಲೋ ಒಂದು ಕಡೆ ನಿಮ್ಮೊಡನೆ ಹಂಚಿಕೊಳ್ಳುವ ಹಂಬಲ ಕೂಡ. ಈ ನಡುವೆ ನನ್ನ ಗೆಳೆಯ ಲಿಂಗದಳ್ಳಿ ಗಣೇಶನ BLOG ನೋಡಿ, ಅದರಿಂದ ಸ್ಪೂರ್ತಿ ಪಡೆದು ನನ್ನೀ "ಹರಟೆ ಕಟ್ಟೆ" ಶುರು ಮಾಡುವ ಸಾಹಸ ಮಾಡಿದ್ಡೇನೆ... ಹೊಸದೊಂದನ್ನು ಶುರು ಮಾಡುವ ಮುನ್ನ ಗಣೇಶನ ಸ್ತುತಿ ಮಾಡುವುದು ಹಿಂದಿನಿಂದ ನಡೆದು ಬಂದ ಅಭ್ಯಾಸ... ನಂದೂ ಅದೇ... ಆದರೆ ಗಣೇಶ ಬೇರೆ ಅಷ್ಟೆ... ಈ "ಬ್ಲಾಗಾಯಣ"ಕ್ಕೆ ಸ್ಪೂರ್ತಿ ಕೂಟ್ಟ ಗಣೇಶ... Thanx Ganesh L D (Ganesh's Blog)

No comments: